Subject : SSLC Third Language Hindi Subject Abhinava Manshin Participate in Quiz Program in our Sandhi...
ಶಾಲೆಗಳಲ್ಲಿ10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾಷೆ, ದೇಶದಸಂಸ್ಕೃತಿ, ಪರಂಪರೆ, ಸಾಮಾನ್ಯ ಜ್ಞಾನ ಹಾಗೂ ಇತರ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಕಿರಿಯ ಹಾಗೂ ಹಿರಿಯರ ವಿಭಾಗ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು (Quiz Competition)ಆನ್ ಲೈನ್ ಮೂಲಕ ಆಯೋಜಿಸುವ ಸಂಬಂಧ ಉಲ್ಲೇಖಿತ ಪತ್ರದ ಸುತ್ತೋಲೆಯಲ್ಲಿ ವಿವರವಾಗಿ ಮಾಹಿತಿ ನೀಡಲಾಗಿತ್ತು.
ಆದರೆ ಕೆಲವು ಜಿಲ್ಲೆಗಳಲ್ಲಿ ಶಾಲಾ ಹಂತದಲ್ಲಿ ಶಿಕ್ಷಕರು ವೇಳಾಪಟ್ಟಿಯಂತೆ ರಸಪ್ರಶ್ನೆಸ್ಪರ್ಧೆಯನ್ನು ನಡೆಸಿ ವಿಜೇತ ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾವಾಹಿನಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರಸಪ್ರಶ್ನೆ ಸ್ಫರ್ಧೆ ಕಾರ್ಯಕ್ರಮದ ವೇಳಾಪಟ್ಟಿಯನ್ನು ಮರು ನಿಗದಿಗೊಳಿಸಲಾಗಿದೆ.
ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ “ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ (Qult Competition) ಸ್ಪರ್ಧೆಯನ್ನು ಆಯೋಜಿಸಲು ಅನುಮೋದನೆಯಾಗಿರುತ್ತದೆ.
ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಅವರಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ, ಸಾಮಾನ್ಯ ಜ್ಞಾನ, ಭಾಷೆ, ಭಾರತ ದೇಶದ ಪರಂಪರೆ ಹಾಗೂ ವಿವಿಧ ಇತರ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಈ ಕಾರ್ಯಕ್ರಮವು ಪೂರಕವಾಗಿದೆ.
ಈ ಉಪಕರಣಗಳು ನಿಮ್ಮ ಜ್ಞಾನವನ್ನು ನಿರ್ಣಯಿಸುತ್ತವೆ:
ಪತ್ರದ ವ್ಯಾಖ್ಯಾನ
ಸಾಹಿತ್ಯ ಕೃತಿ ಇದರಲ್ಲಿ ಮನುಷ್ಯನ ಮೇಲೆ ಒಂದು ಪ್ರಬಂಧ ಪ್ರತಿಧ್ವನಿಸುತ್ತದೆ
ಕವಿತೆಯ ವಿಷಯಗಳು
ಪೋಪ್ ಅನ್ನು ಏಕೆ ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ
ಕೌಶಲ್ಯಗಳನ್ನು ಅಭ್ಯಾಸ ಮಾಡಲಾಗಿದೆ
ಈ ರಸಪ್ರಶ್ನೆ ಮತ್ತು ವರ್ಕ್‌ಶೀಟ್‌ನಲ್ಲಿ ಈ ಕೆಳಗಿನ ಕೌಶಲ್ಯಗಳ ಮೇಲೆ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗುತ್ತದೆ:
SSLC ಮಕ್ಕಳೇ ಓದುವುದು ಹೇಗೆ ಮತ್ತು ಅದರ ಕ್ರಮಗಳು:*
ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸುವುದು ಆದರ್ಶ ವಿದ್ಯಾರ್ಥಿಯ ಲಕ್ಷಣ. ಒಂದು ವೇಳೆ ಅದು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದು ಎದೆಗುಂದುವ ಅಗತ್ಯವಿಲ್ಲ. ಈಗಲೂ ತಡವಾಗಿಲ್ಲ. ಪ್ರಸ್ತುತ ಉಳಿದಿರುವ ಸಮಯದಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದಲ್ಲಿ ಖಂಡಿತಾ ಯಶಸ್ಸು ಗಳಿಸಬಹುದು. ಇಲ್ಲಿ ಹೇಳಲಾಗಿರುವ ಕೆಲವು ಸೂತ್ರಗಳನ್ನು ಪಾಲಿಸಿದಲ್ಲಿ ಪರೀಕ್ಷಾ ಭಯದಿಂದ ದೂರಾಗಬಹುದು.
*1. ವೇಳಾಪಟ್ಟಿ ರೂಪಿಸಿಕೊಳ್ಳಿ.*
ವಾರದಲ್ಲಿ ಏಳು ದಿನಗಳಿವೆ. ನೀವು ಅಧ್ಯಯನ ಮಾಡಬೇಕಾಗಿರುವ ವಿಷಯಗಳನ್ನು ಈ ದಿನಗಳಿಗೆ ಹಂಚಿ ಒಂದು ವೇಳಾಪಟ್ಟಿ ರಚಿಸಿಕೊಳ್ಳಿ. ಭಾಷೆ ಹಾಗೂ ಐಚ್ಛಿಕ ವಿಷಯಗಳಿಗೆ ತಲಾ ಒಂದು ದಿನ ಮೀಸಲಿಡಿ. ಈ ವೇಳಾಪಟ್ಟಿಯನ್ನು ನಿಮ್ಮ ಪೋಷಕರಿಗೆ ತೋರಿಸಿ, ಅವರ ಸಲಹೆ ಪಡೆದುಕೊಳ್ಳಿ. ಅವಶ್ಯವೆನಿಸಿದರೆ, ನಿಮ್ಮ ಶಿಕ್ಷಕರ ಮಾರ್ಗದರ್ಶನ ಪಡೆಯಿರಿ. ದಿನಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಿ. ವೇಳಾಪಟ್ಟಿಯನ್ನು ನೀವು ಅಧ್ಯಯನ ಮಾಡುವ ಜಾಗದಲ್ಲಿ ಎದ್ದು ಕಾಣುವಂತೆ ತೂಗುಹಾಕಿ. ಇದರಿಂದಾಗಿ ಗುರಿ ಕಣ್ಣೆದುರೇ ಇರುತ್ತದೆ, ನೆನಪಿನಲ್ಲಿ ಉಳಿಯುತ್ತದೆ. ವ್ಯವಸ್ಥಿತ ಅಧ್ಯಯನಕ್ಕೆ ವೇಳಾಪಟ್ಟಿ ಅತ್ಯಂತ ಅವಶ್ಯಕ.
*2. ಅಧ್ಯಯನಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಿ.*
ಅಧ್ಯಯನಕ್ಕೆ ಪ್ರತ್ಯೇಕ ಕೊಠಡಿ ಇದ್ದರೆ ಅನುಕೂಲ. ಇಲ್ಲವಾದಲ್ಲಿ, ಇರುವ ಸ್ಥಳಾವಕಾಶದಲ್ಲಿಯೇ ಸದ್ದು–ಗದ್ದಲಗಳಿಂದ ದೂರವಿರುವ ಜಾಗವೊಂದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಸಾಕಷ್ಟು ಗಾಳಿ, ಬೆಳಕು ಇರಬೇಕು. ಮೇಜು ಹಾಗೂ ಒಂದು ಕುರ್ಚಿಯನ್ನು ಹೊಂದಿಸಿಕೊಳ್ಳಿ. ಓದಲು ಅಗತ್ಯವಾದ ಎಲ್ಲ ಅಧ್ಯಯನ ಸಾಮಗ್ರಿಗಳನ್ನು, ( ಪಠ್ಯಪುಸ್ತಕ, ಪಾಠದ ಟಿಪ್ಪಣಿ, ಖಾಲಿ ಹಾಳೆಗಳು, ಪೆನ್, ಪೆನ್ಸಿಲ್ ಇತ್ಯಾದಿ.) ಅಲ್ಲಿ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಿ.
*3. ಅಧ್ಯಯನದ ಸಮಯ.*
ಬೆಳಿಗ್ಗೆ 4ರಿಂದ 7ರ ಸಮಯ ಅಧ್ಯಯನಕ್ಕೆ ಪ್ರಶಸ್ತವಾದುದು. ರಾತ್ರಿಯ ನಿದ್ರೆಯ ಕಾರಣ ಬೆಳಗಿನ ಸಮಯದಲ್ಲಿ ಮೆದುಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿರುತ್ತದೆ. ಇದು ವಿಷಯ ಗ್ರಹಿಕೆಗೆ ಹಾಗೂ ಓದಿದ್ದನ್ನು ನೆನಪಿಟ್ಟುಕೊಳ್ಳುವುದಕ್ಕೆ ಅತ್ಯಂತ ಸಹಾಯಕ.
ಸಂಜೆಯೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿ ನಿದ್ದೆಗೆಟ್ಟು ಓದುವುದನ್ನು ತಪ್ಪಿಸಿ. ಮೈ–ಮನಸಿಗೆ ಅಗತ್ಯವಾದಷ್ಟು ನಿದ್ದೆ ಮಾಡುವುದು ಕೂಡ ಒಳ್ಳೆಯ ಓದಿಗೆ ಸಹಕಾರಿ.
*4. ಸ್ಪಷ್ಟ ಗುರಿಯಿರಲಿ.*
ನಿಮ್ಮ ಸಾಧನೆಗೆ ಒಂದು ನಿರ್ದಿಷ್ಟ ಗುರಿಯನ್ನು ಹಾಕಿಕೊಳ್ಳಿ. ಆ ಗುರಿ ನೈಜವಾಗಿರಬೇಕು, ಸಾಧಿಸುವಂತಿರಬೇಕು ಮತ್ತು ಕಾಲಮಿತಿಗೆ ಒಳಪಟ್ಟಿರಬೇಕು. ಗುರಿಯನ್ನು ತಲುಪುವ ಬಗ್ಗೆ ದೃಢ ಸಂಕಲ್ಪ ಮಾಡಿಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆಗಳು ಧನಾತ್ಮಕವಾಗಿರಲಿ. ಅತಿಯಾದ ಆತ್ಮವಿಶ್ವಾಸ ಬೇಡ. ಹಾಗೆಯೇ ಕೀಳರಿಮೆಯೂ ಬೇಡ.
ಅನವಶ್ಯಕ ವಿಷಯಗಳಿಂದ ದೂರವಿದ್ದಷ್ಟೂ ಗುರಿ ಸಾಧನೆಗೆ ನೀವು ಹತ್ತಿರವಾಗುತ್ತೀರಿ.
*5. ವಿಷಯದ ಆಯ್ಕೆ.*
ನೀವೇ ಸಿದ್ಧಪಡಿಸಿಕೊಂಡಿರುವ ವೇಳಾಪಟ್ಟಿಯ ಪ್ರಕಾರ ಆಯಾ ದಿನದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಲು ಪ್ರಾರಂಭಿಸಿ. ಅದಕ್ಕೆ ಮುನ್ನ ನೀವು ಕುಳಿತ ಜಾಗದಲ್ಲಿಯೇ ಕೆಲವು ನಿಮಿಷಗಳ ಕಾಲ ಕಣ್ಣು ಮುಚ್ಚಿಕೊಳ್ಳಿ. ನಾಲ್ಕೈದು ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಕೆಲವು ಸೆಕೆಂಡುಗಳ ಕಾಲ ವಿರಮಿಸಿ. ಈಗ ಮೈ–ಮನ ಹಗುರಗೊಂಡು ಅಧ್ಯಯನಕ್ಕೆ ಅಗತ್ಯವಾದ ಏಕಾಗ್ರತೆ ಲಭ್ಯವಾಗುತ್ತದೆ. ನಂತರ ಓದಲು ಪ್ರಾರಂಭಿಸಿ.
*ಅಧ್ಯಯನದ ವಿಧಾನ ಹೇಗೆ?*
ನೀವು ಓದಲು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಘಟಕ, ಅಧ್ಯಾಯ ಹಾಗೂ ಉಪವಿಭಾಗಗಳನ್ನು ಗುರುತಿಸಿಕೊಳ್ಳಿ. ವಿಷಯದ ಬಗ್ಗೆ ನಿಮಗೆ ಈ ಹಿಂದಿನ ಓದಿನಿಂದ ಈಗಾಗಲೇ ತಿಳಿದಿರುವ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳಿ. ಇಂದು ಯಾವ ಅಧ್ಯಾಯ ಅಥವಾ ಉಪವಿಭಾಗವನ್ನು ಓದಬೇಕೆಂಬುದನ್ನು ನಿರ್ಧರಿಸಿಕೊಳ್ಳಿ. ಓದುತ್ತಿದ್ದಂತೆ ಅದರಲ್ಲಿರುವ ಮಾಹಿತಿಯನ್ನು ನಿಮ್ಮದೇ ಆದ ಪದಗಳಲ್ಲಿ ಅರ್ಥ ಮಾಡಿಕೊಳ್ಳಿ. ಎರಡು, ಮೂರು ಬಾರಿ ಓದಿ ಪುನರ್ ಮನನ ಮಾಡಿಕೊಳ್ಳಿ. ಓದುವಾಗಲೇ ಪುಟ್ಟ ಟಿಪ್ಪಣಿಗಳನ್ನು ಮಾಡಿಕೊಳ್ಳುವುದರಿಂದ, ಓದಿದ ವಿಷಯ ನೆನಪಿನಲ್ಲಿರುತ್ತದೆ.
ಪ್ರತಿ ಒಂದು ಗಂಟೆ ಅಭ್ಯಾಸದ ನಂತರ ಐದರಿಂದ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯಿರಿ. ಬೇಸರವಾದಲ್ಲಿ, ವಿಷಯ ಅಥವಾ ಅಧ್ಯಾಯವನ್ನು ಬದಲಾಯಿಸಿಕೊಳ್ಳಿ. ಇಲ್ಲವೇ, ಹತ್ತು ನಿಮಿಷಗಳ ಕಾಲ ಜೋರಾಗಿ ದನಿಯೆತ್ತರಿಸಿ ಓದಿ. ಒಂದರಿಂದ ನೂರರವರೆಗೆ ಇಲ್ಲವೇ ನೂರರಿಂದ ಒಂದರವರೆಗೆ ಹಿಮ್ಮುಖವಾಗಿ ಎಣಿಸಿ, ಮತ್ತೆ ಅಭ್ಯಾಸ ಪ್ರಾರಂಭಿಸಿ.
ಕ್ಲಿಷ್ಟಕರ ಎನಿಸಿದ ವಿಷಯಗಳಿಗೆ, ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸಿಕೊಳ್ಳಿ. ಭಾನುವಾರಗಳಂದು ದೊರಕುವ ಹೆಚ್ಚಿನ ಸಮಯವನ್ನು ಇಂಥ ವಿಷಯಗಳಿಗೆ ಮೀಸಲಿಡಿ.
ಒಂದು ಅಧ್ಯಾಯ ಅಥವಾ ಉಪವಿಭಾಗವನ್ನು ಅಧ್ಯಯನ ಮಾಡಿದ ಮೇಲೆ ಖಾಲಿ ಹಾಳೆಯೊಂದರಲ್ಲಿ ಅದಕ್ಕೆ ಸಂಬಂಧಿಸಿದ ಸಾರಾಂಶವನ್ನು ಬರೆದುಕೊಳ್ಳಿ. ಹೀಗೆ ಮಾಡುವಾಗ ಪೂರ್ತಿಯಾಗಿ ವಾಕ್ಯಗಳನ್ನು ಬರೆಯುವ ಬದಲಿಗೆ ಮುಖ್ಯ ಪದಗಳನ್ನು ಮಾತ್ರ ಬರೆದುಕೊಳ್ಳಿ. ಇದೇ ವಿಷಯವನ್ನು ಮತ್ತೆ ಓದುವ ಮುನ್ನ ಈ ಟಿಪ್ಪಣಿಯನ್ನೊಮ್ಮೆ ಪೂರ್ತಿಯಾಗಿ ಅವಲೋಕಿಸಿ, ಮುಂದಕ್ಕೆ ಹೋಗಿ.
ಪ್ರತೀ ವಿಷಯದ ಪ್ರತಿ ಅಧ್ಯಾಯಕ್ಕೆ ಹೀಗೆ ನೀವು ಮಾಡಿಕೊಳ್ಳುವ ಸಾರಾಂಶದ ಹಾಳೆಗಳನ್ನು ಒಂದು ಫೈಲ್‌ನಲ್ಲಿ ಹಾಕಿ ಇಟ್ಟುಕೊಳ್ಳಿ. ಪರೀಕ್ಷೆಯ ಹಿಂದಿನ ದಿನಗಳಲ್ಲಿ ಪುನರ್‌ಮನನ ಮಾಡಿಕೊಳ್ಳಲು ಇದು ಉಪಯುಕ್ತ.
ಸಿದ್ಧತೆಯಲ್ಲಿ ನಿಮಗೆ ಸಹಾಯಕವಾಗಬಲ್ಲ ಸಹಪಾಠಿಗಳನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಿ. ಇಂದು ನೀವು ಓದಿದ ಅಧ್ಯಾಯದ ಬಗ್ಗೆ ಮಾರನೆಯ ದಿನ ಅವರೊಂದಿಗೆ ಚರ್ಚಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ವಿಷಯದ ಬಗ್ಗೆ ಗೊಂದಲಗಳಿದ್ದಲ್ಲಿ ಪರಿಹರಿಸುತ್ತದೆ.
1. Quiz Link 1
2. Quiz Link 2
3. Quiz link 4
4. Quiz Link 4
5. Quiz Link 5
*ಈ ಮೇಲಿನ ಯಾವುದಾದರೂ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಇಂದಿನ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಪ್ರಾರಂಭಿಸಿ.*
👆👆👆👆👆
*All The Best My Dear Students*
👍👍👍👍👍
No comments:
Post a Comment